How to prepare for kset exam
How to study for KSET
¶ ಹಳೆಯ ಪ್ರಶ್ನೆಪತ್ರಿಕೆಗಳನ್ನು ಓದಿ ಯಾವ ಟಾಪಿಕ್ ಗಳ ಮೇಲೆ ಪ್ರಶ್ನೆಗಳನ್ನ ಕೇಳಿದ್ದಾರೆ ˌಯಾವುದಕ್ಕೆ ಹೆಚ್ಚು ಮಹತ್ವ ನೀಡಬೇಕು ಮತ್ತು ನೀಡಬಾರದು ಎಂದು ತಿಳಿದುಕೊಳ್ಳಿ.ಅವೇ ಪ್ರಶ್ನೆಗಳು ಬರುತ್ತವೆ ಎಂದು ಅಲ್ಲ ಟಾಪಿಕ್ ಬರಬಹುದು.1-2 ಪ್ರಶ್ನೆಗಳು ಕೇಳಿದರೂ ಕೇಳಬಹುದು.
¶ ನೀವು ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ನಿಮ್ಮ ವಿಷಯದ ಬಗ್ಗೆ ಎಷ್ಟು ತಿಳಿದುಕೊಂಡಿದ್ದೀರಿ ಎನ್ನುವುದರ ಮೇಲೆ ನೀವು ಎಷ್ಟು ಓದಬೇಕು?ಏನು ಓದಬೇಕು? ಎನ್ನುವುದು ಅವಲಂಬಿತವಾಗಿರುತ್ತೆ.ಈಗ ಓದಿ ತಿಳಿದುಕೊಳ್ಳಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ˌ ಆವಾಗಲೇ ತಿಳಿದುಕೊಂಡಿದ್ಡವರಿಗೆ ಕಡಿಮೆ ಸಮಯ ತೆಗೆದುಕೊಳ್ಳಬಹುದು. ಓದಿದರೆ ಎಲ್ಲವೂ ಸಾದ್ಯ.
¶ ನಿಮ್ಮಲ್ಲಿರುವ ಪುಸ್ತಕಗಳಲ್ಲಿ ಪರೀಕ್ಷೆಯಲ್ಲಿ ಬಂದಿರುವ ವಿಷಯ ಇಲ್ಲದಿದ್ದರೆ ಬೇರೆ ಪುಸ್ತಕ ಅಥವಾ ಗೂಗಲ್ ಅಲ್ಲಿ ನೋಡಿ ಸಂಗ್ರಹಿಸಿಕೊಳ್ಳಿˌ
ನೆನಪಿರಲಿ ನೋಟ್ಸ್ pdf ಸಂಗ್ರಹಿಸುವ ಯಂತ್ರಗಳಾಗಬೇಡಿ ಸಂಗ್ರಹಿಸಿದ ಎಲ್ಲವನ್ನೂ ಓದಲು ಸಾದ್ಯವಿಲ್ಲ.
¶ ಪೇಪರ್ 1 ಮತ್ತು ಪೇಪರ್ 2 ಯಾವುದರಲ್ಲಿ ಹೆಚ್ಚು ಅಂಕಗಳು ಬರುವದಿಲ್ಲವೆಂದು ತಿಳಿದುಕೊಂಡು ಅದರ ಪ್ರಕಾರ ಓದಿˌ (ನೆನಪಿರಲಿ ಎರಡು ಪೇಪರ್ ಮುಖ್ಯ ಯಾವುದನ್ನು ಮಾಡಬೇಡಿ)
¶ ಪೇಪರ್ 1 ಗೆ ದಿನಾಲೂ ನೀವು 1 ಗಂಟೆ ತಪ್ಪದೆ ಮೀಸಲಿಡಲೆಬೇಕು.ಪೇಪರ್ 1 ಗೆ ನಮ್ಮಲ್ಲಿ ಹೆಚ್ಚು ವಿಷಯ ಅಥವಾ ಪುಸ್ತಕ ಸಿಗದೆ ಇರಬಹುದು ˌಪೇಪರ್ 1 ಪುಸ್ತಕದಲ್ಲಿ ಇದ್ದಂತಹ ವಿಷಯಗಳ ಮೇಲೇ ಪ್ರಶ್ನೆ ಕೇಳುತ್ತಾರೆ ಎಂದು ಹೇಳುವುದು ಸಾದ್ಯವಿಲ್ಲ ˌಪುಸ್ತಕಗಳು ಎಲ್ಲಾ ಟಾಪಿಕ್ ವಿಷಯಗಳನ್ನು ಹೊಂದಿರುವುದಿಲ್ಲ ˌಪರೀಕ್ಷೆಯಲ್ಲಿ ಪುಸ್ತಕದ ಹೊರಗೂ ಪ್ರಶ್ನೆಗಳನ್ನು ಕೇಳುತ್ತಾರೆ ˌಕೇಳಿದ್ದಾರೆ.
¶ NET Paper 1 ಪರೀಕ್ಷೆಯಲ್ಲಿ ಕೇಳುವಷ್ಟು ಆಳ ಕೆಸೆಟ್ ಪರೀಕ್ಷೆಯಲ್ಲಿ ಕೇಳುವುದಿಲ್ಲ ..KSET ಮತ್ತು NET ಒಂದೇ ಪಠ್ಯಕ್ರಮ ಆದರೆ ಕೇಳುವ ಪ್ರಶ್ನೆಗಳ ಮಾದರಿ ಭಿನ್ನ.
¶ NET & KSET ಎರಡೂ ಪರೀಕ್ಷೆಗಳು ಬರೆಯುವವರು ಮೊದಲು ಕೆಸೆಟ್ ಪರೀಕ್ಷೆಯ ಪ್ರಕಾರ ಓದಿ ˌNET ಗೆ ಸಮಯವಿದೆ ˌಈ ಕಡಿಮೆ ಸಮಯದಲ್ಲಿ ಎಲ್ಲವನ್ನು ಆಳವಾಗಿ ಓದುವುದು ಸಾದ್ಯವಿಲ್ಲ. ಕೆಸೆಟ್ Paper 1 ಗೆ ಯಾವ ಟಾಪಿಕ್ ಗಳು ಕೇಳುತ್ತಾರೆ ˌನೆಟ್ ಗೆ ಯಾವ ಟಾಪಿಕ್ ಗಳು ಕೇಳುತ್ತಾರೆಂದು ವಿಭಾಗಿಸಿಕೊಂಡು ಓದಿ.ಈ ಮಾಹಿತಿ ಇದು ಪೇಪರ್ 1 ಸೂಕ್ತ..ಕೆಸೆಟ್ paper 1 ಅಲ್ಲಿ ಅಷ್ಟೊಂದು ಆಳವಾಗಿ ಪ್ರಶ್ನೆಗಳು ಕೇಳುವುದಿಲ್ಲ ಮತ್ತು 1-2 ಪ್ರಶ್ನೆಗಳು ಪಠ್ಯಕ್ರಮದ ಹೊರಗೂ ಕೇಳುತ್ತಾರೆ.
¶ ಪೇಪರ್ 1 ಗೆ ಸಂಬಂದಪಟ್ಟಂತೆ ನಮ್ಮ ಗ್ರೂಪ್ ಅಥವಾ ಬೇರೆ ಗ್ರೂಪ್ ಗಳಲ್ಲಿ ಕ್ವಿಜ್ ಗಳನ್ನು ಭಾಗವಹಿಸಿ.
ಪೇಪರ್ 1 ಸಂಬಂಧಿಸಿದಂತೆ Pravinyata & Gopal’s Educity ˌAkka Tv ಇನ್ನೂ ಬೇರೆಯವರ ಯ್ಯೂಟ್ಯೂಬ್ ಚಾನಲ್ ಗಳನ್ನ ನೋಡಿ.
¶ ನಿಮಗೆ ಯಾವ ಸಮಯದಲ್ಲಿ ಓದಲು ಸಾದ್ಯವಾಗುತ್ತೋ ಅದರ ಪ್ರಕಾರ ಓದಿ ˌಆದರೆ ದಿನಾಲೂ ತಪ್ಪದೆ ಓದಿ ˌ
¶ free Mock test & Quizzes ಗೋಸ್ಕರ Unacademy & Gradeup Apps ಬಳಸಿ ˌತಪ್ಪು ಉತ್ತರಗಳನ್ನು ತಿಳಿದುಕೊಂಡು ಆ ಟಾಪಿಕ್ ಗಳನ್ನು ಓದಿಕೊಳ್ಳಿ ˌಸುಮ್ಮನೆ ಭಾಗವಹಿಸುವುದ ಅಥವಾ ಏನೂ ಓದದೆ ಭಾಗವಹಿಸುವುದು ವ್ಯರ್ಥ. ತಪ್ಪುಗಳನ್ನು ತಿದ್ದಿಕೊಳ್ಳಲು ಮತ್ತು ಅರ್ಥೈಸಿಕೊಳ್ಳಲು ಕ್ವಿಜ್ ಗಳು ಸಹಾಯಕಾರಿ.
¶ ಹಳೇಯ ಪ್ರಶ್ನೆಪತ್ರಿಕೆಗಳನ್ನು ತಪ್ಪದೆ ಬಿಡಿಸಿ ಒಂದು ದಿನ ಅಥವಾ ಎರಡು ದಿನಗಳಿಗೆ ಒಂದರಂತೆ ಎಲ್ಲಾ ವರ್ಷಗಳ ಪತ್ರಿಕೆಗಳನ್ನು ಬಿಡಿಸಿ.ಕೆಸೆಟ್ ವೆಬ್ ಸೈಟ್ ಅಲ್ಲಿ ಸಿಗುತ್ತವೆ ಅವುಗಳನ್ನೆಲ್ಲಾ ಪ್ರೀಂಟ್ ಮಾಡಿಸಿಕೊಳ್ಳಿ..
¶ ದಿನಾಲೂ ಏನು ಓದ್ದೀರಿ ಎಂದು ದಿನಾಲೂ ಮಲಗುವ ಮುಂಚೆ ಮೆಲಕುಹಾಕಿ.
¶ ಪಠ್ಯಕ್ರಮ ಮುಗಿಸಿದಮೇಲೆ ಪುನಾರವರ್ತನೆ ಮಾಡಲೇಬೇಕು (Revision)
¶ ನಕರಾತ್ಮಕ ಯೋಚನೆಗಳು ˌಇನ್ನೊಬ್ಬರಿಗೆ ಹೋಲಿಸಿಕೊಳ್ಳುವುದು ˌನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುವುದು ˌಇವೆಲ್ಲವುಗಳನ್ನು ತಲೆಯಿಂದ ತೆಗೆದುಬಿಡಿ.
¶ success key is Revision,Revision ,Revision
Practice practice practice
¶ Success= Hardwork+Consistency+Patience
Join our telegram group – https://t.me/ksetk
ಶುಭವಾಗಲಿ
🧠 Cracking UGC-NET with Confidence: A Simple Take on Shabda, Arthapatti, Anupalabdhi, Anumana & Vyapti…
📚 Mastering Input and Output Devices for UGC NET Paper 1 – ICT Concepts Explained…
🎓 Twisted but True: 10 Unique SDG MCQs for UGC NET (with Kannada-English Mix!) Have…
Introduction In today’s digital world, education is often associated with marks, degrees, and jobs. But…
ancient Indian education system Introduction The ancient Indian education system is a treasure trove of…
IntroductionUnderstanding the history of the Indian education system is crucial for cracking the UGC NET…
View Comments
Thanks for your valuable information.
Thanks for showing the way of good preparation
Thanks sir useful information
Really it's very usfull information
Thank you
Thank you sir .. Good guidelines
Thank you for your feedback.read well and and advance all the best